Can wearing a mask protect you from Corona Virus in Kannada | Boldsky Kannada

2020-03-04 100

ಕೊರೊನಾ ವೈರಸ್‌ನಿಂದ ಬರುವಂಥ ಕೋವಿಡ್ 19 ಎಂಬ ಮಾರಾಣಾಂತಿಕ ಕಾಯಿಲೆ ಚೀನಾ ದೇಶ ಮಾತ್ರವಲ್ಲ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿದೆ. ಈ ಕಾಯಿಲೆಗೆ ಯಾವುದೇ ಔಷಧಿ ಇಲ್ಲದ ಕಾರಣ ಸದ್ಯಕ್ಕೆ ಈ ಭಯಾನಕ ಕಾಯಿಲೆ ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ಅದು ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು. ಕೊರೊನೊ ವೈರಸ್ ಸೋಂಕಿರುವ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ, ಅವರು ಮುಟ್ಟಿದ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿ ಮುಟ್ಟಿದರೆ ಈ ರೋಗ ಹರಡುವುದರಿಂದ ಈ ರೋಗ ತಡೆಗಟ್ಟುವುದು ವೈದ್ಯಕೀಯ ಲೋಕಕ್ಕೆ ಸವಾಲಿನ ಕೆಲಸವಾಗಿದೆ. ಈ ರೋಗವನ್ನು ತಡೆಗಟ್ಟಲು ವಿಜ್ಞಾನಿಗಳು, ವೈದ್ಯರು ಹರ ಸಾಹಸ ಪಡುತ್ತಿದ್ದು ಈ ರೋಗ ತಡೆಗಟ್ಟಲು ಕೆಲವೊಂದು ಸಲಹೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಸರ್ಜಿಕಲ್ ಫೇಸ್‌ ಮಾಸ್ಕ್‌ ಬಳಸುತ್ತಿದ್ದಾರೆ. ಕೆಲವರು ತಮ್ಮ ಮುದ್ದಿನ ನಾಯಿಗಳಿಗೂ ಮಾಸ್ಕ್‌ ಧರಿಸುತ್ತಿದ್ದಾರೆ. ಆದರೆ ಈ ರೀತಿ ಮಾಸ್ಕ್ ಧರಿಸುವುದರಿಂದ ಕೊರೊನಾ ವೈರಸ್ ತಡೆಗಟ್ಟಲು ಸಾಧ್ಯವೇ? ಈ ಮಾಸ್ಕ್‌ ಎಷ್ಟರ ಮಟ್ಟಿಗೆ ರೋಗ ನಿಯಂತ್ರಣ ಮಾಡುತ್ತದೆ ಎಂದು ನೋಡೋಣ ಬನ್ನಿ.